ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ದಿನಪತ್ರಿಕೆಗಳಲ್ಲಿ ‘ಆರೋಗ್ಯ ಆಶಯ’ ಮತ್ತು ‘ಆರೋಗ್ಯ ಪ್ರಭ’ ಎಂಬ ಅಂಕಣಗಳಲ್ಲಿ ಜೂನ್ 2012ರಿಂದ ಜನವರಿ 2016ರವರೆಗೆ ನಾನು ಬರೆದಿದ್ದ 76 ಲೇಖನಗಳ ಸಂಗ್ರಹರೂಪವೇ ಈ ‘ಆರೋಗ್ಯ ಆಶಯ’ ಎಂಬ ಪುಸ್ತಕ. ವೈದ್ಯ ವಿಜ್ಞಾನದ ಹೊಸ ಬೆಳವಣಿಗೆಗಳ ಬಗ್ಗೆ, ವೈದ್ಯಕೀಯ ಕ್ಷೇತ್ರದ ಆಗು-ಹೋಗುಗಳು ಮತ್ತು ಸಮಕಾಲೀನ ಸಮಸ್ಯೆಗಳ ಬಗ್ಗೆ, ಆರೋಗ್ಯ ಸೇವೆಗಳಲ್ಲಿ ಕಂಡುಬರುತ್ತಿರುವ ಸಮಸ್ಯೆಗಳ ಬಗ್ಗೆ ಹಾಗೂ ಸರಕಾರಗಳ ನೀತಿನಿಯಮಗಳ ಬಗ್ಗೆ, ವೈದ್ಯಕೀಯ ಶಿಕ್ಷಣವು ಹದಗೆಡುತ್ತಿರುವ ಬಗ್ಗೆ, ವೈದ್ಯಕೀಯ ಪದ್ಧತಿಗಳು ಬೆಳೆದು ಬಂದ ಬಗ್ಗೆ ಹಾಗೂ ಬದಲಿ ಪದ್ಧತಿಗಳ ಪ್ರಸ್ತುತತೆಯ ಬಗ್ಗೆ, ಜನಸಾಮಾನ್ಯರು ಆರೋಗ್ಯ ಸೇವೆಗಳನ್ನು ಪಡೆಯುವಲ್ಲಿ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ, ಆಧುನಿಕ ರೋಗಗಳಿಗೂ, ನಮ್ಮ ಆಹಾರ ಮತ್ತು ಜೀವನ ಶೈಲಿಗಳಿಗೂ ಇರುವ ಸಂಬಂಧಗಳ ಬಗ್ಗೆ ಬರೆದಿರುವ ಈ ಲೇಖನಗಳನ್ನು ಹತ್ತು ಆಶಯಗಳಡಿಯಲ್ಲಿ ವಿಂಗಡಿಸಿ, ಅವಕ್ಕೆ ಕೊಂಡಿಗಳಾಗಿ ಪ್ರತೀ ಲೇಖನದ ಮೊದಲಿಗೆ ಕಿರು ಟಿಪ್ಪಣಿಗಳನ್ನು ಸೇರಿಸಲಾಗಿದೆ, ಇನ್ನಷ್ಟು ತಿಳಿಯಬಯಸುವವರಿಗೆ ನೆರವಾಗಲೆಂದು ಹೆಚ್ಚಿನ ಲೇಖನಗಳಿಗೆ ಸೂಕ್ತ ಆಕರಗಳನ್ನು ಒದಗಿಸಲಾಗಿದೆ. ಈ ಆಶಯಗಳನ್ನು ಬಿಂಬಿಸುವ ಬಹು ಅರ್ಥಗರ್ಭಿತವಾದ ಹೊದಿಕೆಯೂ ಪುಸ್ತಕಕ್ಕಿದೆ. [ಆರೋಗ್ಯ ಆಶಯ ಲೋಕಾರ್ಪಣೆ, ಮೇ 22, 2017]
‘ಆರೋಗ್ಯ ಆಶಯ’ ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಠ ವೈದ್ಯಕೀಯ ಲೇಖಕ ಪ್ರಶಸ್ತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಬಿಸಿಲೇರಿ ಜಯಣ್ಣ ಮತ್ತು ಬಿಸಿಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿ ಲಭಿಸಿವೆ. [ಆರೋಗ್ಯ ಆಶಯಕ್ಕೆ ಪ್ರಶಸ್ತಿಗಳು]
Leave a Reply