‘ವಿಜಯ ಕರ್ನಾಟಕ’ ಹಾಗೂ ‘ಕನ್ನಡ ಪ್ರಭ’ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಒಟ್ಟು 77 ಅಂಕಣ ಬರಹಗಳನ್ನು ಹತ್ತು ಆಶಯಗಳಡಿಯಲ್ಲಿ ಕಟ್ಟಿಟ್ಟಿರುವ ‘ಆರೋಗ್ಯ ಆಶಯ’ ಸಂಕಲನವನ್ನು 2017, ಮೇ 22, ರವಿವಾರದಂದು ಬೆಳಗ್ಗೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರು ಬೆಂಗಳೂರಿನಲ್ಲಿ ಲೋಕಾರ್ಪಣೆ ಮಾಡಿದರು. ಡಾ. ಎಲ್. ಹನುಮಂತಯ್ಯ, ಡಾ. ನಾಗತಿಹಳ್ಳಿ ಚಂದ್ರಶೇಖರ್, ಡಾ. ಜಿ ರಾಮಕೃಷ್ಣ, ಸಿ ಆರ್ ಕೃಷ್ಣ ರಾವ್, ಅಬ್ದುಲ್ ರೆಹಮಾನ್ ಪಾಷ, ಡಾ. ಗೀತಾ ಶೆಣೈ, ಸ. ರಘುನಾಥ, ಎ ಸಿ ಡೋಂಗ್ರೆ ಅವರಂತಹ ಹಿರಿಯರು ಜೊತೆಗಿದ್ದರು.
ಎಂಸಿ ನರಸಿಂಹನ್, ಆರ್ ಎಸ್ ರಾಜಾರಾಂ, ಡಾ. ಸಿದ್ದನಗೌಡ ಪಾಟೀಲ್, ಎ ಆರ್ ಉಡುಪ, ಡಾ. ಪ್ರಕಾಶ್ ರಾವ್, ಡಾ. ಸಿ ಆರ್ ಚಂದ್ರಶೇಖರ್ ಮುಂತಾದ ಹಿರಿಯರೂ ಇದ್ದರು.
ಕನ್ನಡ ಪ್ರಭ ಬಳಗದ ಪ್ರಧಾನ ಸಂಪಾದಕ ಸುಗತ ಶ್ರೀನಿವಾಸರಾಜು ಸಕುಟುಂಬ ಹಾಜರಿದ್ದರು. ಹಾಗೆಯೇ, ಈ ಬರಹಗಳು ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಪ್ರಕಟಗೊಂಡಾಗ ನೆರವಾಗಿದ್ದ ಕುಮಾರ್ ಹಾಗೂ ಸಹ್ಯಾದ್ರಿ ನಾಗರಾಜ್, ಮುಖಪುಟ ರಚಿಸಿದ ಕಲಾವಿದ ಸಂತೋಷ್ ಸಸಿಹಿತ್ಲು, ಮಿತ್ರರಾದ ಎನ್ ಎ ಎಂ ಇಸ್ಮಾಯಿಲ್, ಅಭಯ ಸಿಂಹ, ಡಾ. ಶ್ರೀನಿವಾಸ ಪ್ರಭು ಮುಂತಾದವರು ಕೂಡ ಭಾಗಿಗಳಾಗಿದ್ದರು.
ಈ ಕೃತಿಯನ್ನು ಗುರು ಡಾ. ಚಿತ್ತರಂಜನದಾಸ ಹೆಗ್ಡೆಯವರ ನೆನಪಿಗೆ ಅರ್ಪಿಸಲಾಗಿದ್ದು, ಅವರ ಮನೆಯವರೆಲ್ಲರೂ, ಭಾವ, ಮಾಜಿ ಸಚಿವ ಶ್ರೀ ಜಯಪ್ರಕಾಶ ಹೆಗ್ಡೆ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇಲ್ಲಿ ಲಭ್ಯ: http://www.navakarnatakaonline.com/aarogya-aashaya-a-collection-of-articles