ನಮ್ಮ ಕುಡ್ಲ – ಕೊರೋನ ನಿಯಂತ್ರಣ – ಎಪ್ರಿಲ್ 12, 2021
ಹೆಚ್ಚಿನವರಿಗೆ ಕೊರೋನ ಸೋಂಕುವುದು ಅವರವರ ಮನೆಗಳ ಒಳಗೆ; ಹೊರಗೆ ಲಾಕ್ ಡೌನ್, ಕರ್ಫ್ಯೂ ಹಾಕಿ ಫಲವಿಲ್ಲ
ಕೊರೋನ ಹೆಸರಲ್ಲಿ ಒಬ್ಬರನ್ನು ಇನ್ನೊಬ್ಬರೆದುರು ಜಗಳಾಡುವಂತೆ, ದ್ವೇಷಿಸುವಂತೆ ಮಾಡಲಾಗುತ್ತಿದೆ – ಜನರು-ಪೋಲೀಸರ ನಡುವೆ, ಭಿನ್ನಜಾತಿ- ಮತಗಳವರ ನಡುವೆ, ಮನೆಯೊಡೆಯರು-ನೌಕರರ ನಡುವೆ, ಕೆಳಸ್ತರಗಳವರು-ಮೇಲಿನ ಸ್ತರಗಳವರ ನಡುವೆ ಅಪನಂಬಿಕೆ, ದೂರವಿಡುವಿಕೆ, ಸಂಘರ್ಷಗಳಾಗುತ್ತಿವೆ.
ಕೊರೋನ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಿಲ್ಲ. ಯಾರಿಗೆ ಅದು ಸೋಂಕಿಲ್ಲವೋ, ಅಂಥವರಿಗೆ ಅದೀಗ ಸೋಂಕುತ್ತಿದೆ, ಈ ಬಾರಿಯೂ ಸೋಂಕದವರಿಗೆ ಮುಂದೆಂದಾದರೂ ಸೋಂಕಲಿದೆ. ನಮ್ಮ ದೇಶದಲ್ಲಿ ಕೊರೋನದಿಂದ ಗಂಭೀರ ಸಮಸ್ಯೆಗಳಾಗದಂತೆ ತಡೆಯುವುದು, ಸಾವುಗಳಾಗದಂತೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದೇ ಆದ್ಯತೆಯಾಗಬೇಕು.
ಲಸಿಕೆಗಳು ಸೋಂಕನ್ನು ತಡೆಯುವುದಿಲ್ಲ, ಅವುಗಳ ಸಾಧಕ-ಬಾಧಕಗಳ ಬಗ್ಗೆ ಇನ್ನೂ ಅಧ್ಯಯನಗಳು ಮುಗಿದಿಲ್ಲ. ಆದ್ದರಿಂದ ಲಸಿಕೆಗಳನ್ನಷ್ಟೇ ನಂಬಿ ಕೊರೋನ ನಿಭಾಯಿಸಲು ಸಾಧ್ಯವಿಲ್ಲ.
ಈಗಾಗಲೇ ಹಲವರಿಗೆ ಕೊರೋನ ಸೋಂಕಿ ಗುಣ ಹೊಂದಿರುವುದರಿಂದ ಅಂಥವರನ್ನೂ ಕೂಡ ಹಿಂಸಿಸುವುದಕ್ಕೆ ಅರ್ಥವಿಲ್ಲ
Leave a Reply