ಮೆಟಾ ನ್ಯೂಮೋ ವೈರಸ್ ಭೀತಿ ಅನಗತ್ಯ

ಮೆಟಾ ನ್ಯೂಮೋ ವೈರಸ್ ಭೀತಿ ಅನಗತ್ಯ

ಮೆಟಾ ನ್ಯೂಮೋ ವೈರಸ್ ಸೋಂಕಿನ ಬಗ್ಗೆ ಅನಗತ್ಯವಾದ ಭೀತಿಯನ್ನು ಹರಡಲಾಗುತ್ತಿದೆ. ಇದೊಂದು ಅತಿ ಹಳೆಯ, ಅತಿ ಸಾಮಾನ್ಯವಾದ, ಅತಿ ಸರಳವಾದ ವೈರಸ್ ಆಗಿದ್ದು, ಅತಿ ಸಣ್ಣ ಮಕ್ಕಳಲ್ಲಿ ಅತಿ ಸೌಮ್ಯವಾದ ಸೋಂಕನ್ನುಂಟು  ಮಾಡಿ ಎರಡು-ಮೂರು ದಿನಗಳಲ್ಲಿ ದೇಹದ ರೋಗ ನಿರೋಧಕ ಶಕ್ತಿಯ ಬಲದಿಂದಲೇ ವಾಸಿಯಾಗುತ್ತದೆ. 

ಈ ಹ್ಯುಮನ್ ಮೆಟಾ ನ್ಯೂಮೋ ವೈರಸ್ ಸಾವಿರಾರು ವರ್ಷಗಳಿಂದಲೂ ಮನುಷ್ಯರ ನಡುವೆ ಎಲ್ಲಾ ದೇಶಗಳಲ್ಲೂ ಪ್ರಚಲಿತವಿದ್ದು, ಬಹುತೇಕ ಎಲ್ಲರಲ್ಲೂ ಈಗಾಗಲೇ ಸೋಂಕನ್ನುಂಟು ಮಾಡಿ ವಾಸಿಯಾಗಿ ಹೋಗಿದೆ. ಇದು ಬಹುತೇಕ ಎಲ್ಲರಲ್ಲಿ ಅತ್ಯಂತ ಸೌಮ್ಯವಾಗಿ ಗಂಟಲಿನ ಸೋಂಕನ್ನುಂಟು ಮಾಡುತ್ತದೆ. ಈ ವೈರಸ್ ಅನ್ನು ಆಧುನಿಕ ತಳಿ ಪರೀಕ್ಷೆಯ ವಿಧಾನಗಳ ಮೂಲಕ 2001ರಲ್ಲಿ ನೆದರ್ಲೆಂಡಿನಲ್ಲಿ ಮೊದಲ ಬಾರಿಗೆ ಗುರುತಿಸಲಾಯಿತಾದರೂ, ಇದು ಅಲ್ಲಿ ಆಗ ಹುಟ್ಟಿದ್ದೇನಲ್ಲ, ಅದಕ್ಕೂ ಮೊದಲೇ ಪಕ್ಷಿಗಳಿಂದ ಮನುಷ್ಯರಿಗೆ ಹರಡಿ, ಬಳಿಕ ಮನುಷ್ಯರೊಳಗೆ ಹರಡುತ್ತಾ ವಿಶ್ವವ್ಯಾಪಿಯಾಗಿರುತ್ತದೆ. ಮೊದಲು ಗುರುತಿಸಲ್ಪಟ್ಟ ಬಳಿಕ ಈ ವೈರಸಿನ ಬಗ್ಗೆ ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಅನೇಕ ಅಧ್ಯಯನಗಳಾಗಿದ್ದು, ಹುಟ್ಟಿನಿಂದ ಆರು ವರ್ಷದೊಳಗಿನ ಮಕ್ಕಳಲ್ಲೂ ಶೇ. 69-89ರಷ್ಟು ಸೋಂಕನ್ನುಂಟು ಮಾಡುತ್ತದೆ ಎಂದೂ, 20 ವರ್ಷ ವಯಸ್ಸಿನೊಳಗೆ ಶೇ 100ರಷ್ಟು ಮಂದಿಯಲ್ಲಿ ಸೋಂಕನ್ನುಂಟು ಮಾಡುತ್ತದೆ ಎಂದು 2005ರಲ್ಲೇ ಗುರುತಿಸಲಾಗಿತ್ತು. ಸಣ್ಣ ಮಕ್ಕಳಾಗಿರುವಾಗಲೇ ಹೆಚ್ಚಿನವರು ಈ ಸೋಂಕನ್ನು ಪಡೆದು ಜೀವನ ಪರ್ಯಂತ ಉಳಿಯುವ ರೋಗ ನಿರೋಧಕ ಶಕ್ತಿಯನ್ನು ಪಡೆಯುವುದರಿಂದ ಹೊಸ ಸೋಂಕುಗಳು ಅತಿ ಸಣ್ಣ ವಯಸ್ಸಿನ (ಕೆಲವು ತಿಂಗಳುಗಳ) ಮಕ್ಕಳಲ್ಲೇ ಗುರುತಿಸಲ್ಪಡುತ್ತವೆ. ಈಗ ಭಾರತದಿಂದ ವರದಿಯಾಗಿರುವ ಎಲ್ಲಾ ಪ್ರಕರಣಗಳು ಕೂಡ ಹೀಗೆ ಒಂದೆರಡು ತಿಂಗಳ ಶಿಶುಗಳಲ್ಲೇ ಉಂಟಾಗಿರುವುದು ಇದನ್ನೇ ಪುಷ್ಠೀಕರಿಸುತ್ತದೆ. ಎಲ್ಲಾ ವಯಸ್ಕರೂ ಇದರಿಂದ ಸೋಂಕಿತರಾಗಿರುವುದರಿಂದ ಅವರಲ್ಲಿ ಇದು ಮತ್ತೆ ಉಂಟಾಗುವ ಸಾಧ್ಯತೆಗಳು ತೀರಾ ವಿರಳವೇ. ಇಂಥ ಸೋಂಕಿನಿಂದ ತೀವ್ರ ಸ್ವರೂಪದ ಸಮಸ್ಯೆಗಳಾಗುವುದು ಇನ್ನೂ ಅಪರೂಪವೇ. ಆದ್ದರಿಂದ ಈ ಬಗ್ಗೆ ಯಾರೂ ಚಿಂತಿತರಾಗುವ ಅಗತ್ಯವೇ ಇಲ್ಲ.

ಎಚ್‌ಎಂಪಿವಿ ಬಗ್ಗೆ ಭಯ ಬೇಡ: ವಾರ್ತಾಭಾರತಿ ವಿಡಿಯೋ ಜನವರಿ 6, 2025

HMPV ವೈರಸ್ ನಿಂದ ಯಾವುದೇ ಸಮಸ್ಯೆಯಾಗುವುದಿಲ್ಲ, ಜನರಲ್ಲಿ ಭಯಹುಟ್ಟಿಸಬೇಡಿ : ಡಾ.ಶ್ರೀನಿವಾಸ ಕಕ್ಕಿಲ್ಲಾಯ

ವಾರ್ತಾಭಾರತಿ, ಜನವರಿ 7, 2025
https://www.varthabharati.in/lead-news/hmpv-virus-will-not-cause-any-problem-dont-panic-people-drsrinivasa-kakkillaya-2045933

ವಾರ್ತಾಭಾರತಿ ಚರ್ಚೆ, ಜನವರಿ 6, 2025

ಎಚ್‌ಎಂಪಿವಿ ಬಗ್ಗೆ ಸುಳ್ಳು ಸುದ್ದಿಗಳಿಂದ ಆತಂಕಿತರಾಗಬೇಡಿ: ಸನ್ಮಾರ್ಗ ನ್ಯೂಸ್, ಜನವರಿ 7, 2025

ಪ್ರಜಾವಾಣಿ, ಜನವರಿ 7, 2025

ಪ್ರಜಾವಾಣಿ, ಜನವರಿ 8, 2025

Be the first to comment

Leave a Reply

Your email address will not be published.


*