Press Release Opposing Compulsory Yoga in Schools
Published on nirmukta.com on Jan 9, 2009
The Govt. of Karnataka has drawn up plans for introducing Yoga as a compulsory learning for the students in the state and the information that we have obtained under the Right to Information Act confirms that the Govt. is planning to start the project all over the state, right from the first standard.
According to the State Directorate of Education Research and Training,(DERT) it has been proposed to include Yoga training for 5 classes a week for the 1-5 standards, 3 classes a week for 6-7 standards and for 4 classes a week for 8-10 standards, with both theoretical and practical training, followed by regular tests and evaluations on the subject of Yoga, right from the first standard. The Directorate has also informed that 65000 teachers at a cost of Rs. 4.55 crores will be appointed for the purpose of Yoga education in Primary and Secondary schools.
This decision of the Govt, does not appear to be evidence based. Although there have been some short term, open studies involving small number of subjects on the benefits and adverse effects of different forms of Yoga, there are no large, long term, double blind, randomized, controlled studies to support the claims that the practice of Yoga is doubtlessly useful or totally safe. Moreover, the state DERT has also not conducted any studies on the benefits or ill effects of Yoga on the physical and mental well being of children. There are no reports to show that the practice of Yoga is as useful as other forms of exercise or sports in promoting the healthy growth and development of children or that yoga has any effect on the memory or other capabilities of children or that it is safe in young children whose bones and other body parts are as yet growing. Also, with the present day education being a burden on the kids, the introduction of Yoga as a full subject may enhance this burden further rather than alleviating it in any way. While there is an urgent need to promote different sporting activities in our schools and colleges to substantially improve the dismal standing of our country in the sporting arena like the Olympics, this decision to allot so much time for Yoga alone, much more than the time hitherto allotted to all physical
Therefore, before taking such greatly hurried decisions that can have long term effects on the health and future of our children, we urge the Govt. of Karnataka to conduct detailed, long term and controlled studies on the effects of Yoga on children, to solicit the views of students, parents, medical experts, sportsmen and physical education trainers and evolve a consensus on the issue of physical education for children. Training in Yoga for all children should not be made compulsory under any circumstances.
Dr. B.S. Kakkilaya, Consultant Physician, Mangalore
Prof. Narendra Nayak, Biochemist and President, Fed of Indian Rationalist Assns, Mangalore
Dr. K.S. Madhava Rao, Psychiatrist and President, D.K. Rationalist Association, Mangalore
Mangalore
Jan 6, 2009
ಪತ್ರಿಕಾ ಪ್ರಕಟಣೆ
ಕರ್ನಾಟಕ ಸರಕಾರವು ರಾಜ್ಯದ ಶಾಲೆಗಳಲ್ಲಿ ಯೋಗಶಿಕ್ಷಣವನ್ನು ಕಡ್ಡಾಯಗೊಳಿಸುವ ಯೋಜನೆಯನ್ನು ಹಾಕಿಕೊಂಡಿದ್ದು, ಈ ಬಗ್ಗೆ ಮಾಹಿತಿ ಕಾಯಿದೆಯಡಿಯಲ್ಲಿ ನಾವು ಪಡೆದಿರುವ ವಿವರಗಳನ್ನು ಗಮನಿಸಿದರೆ, ರಾಜ್ಯಾದ್ಯಂತ ಒಂದನೇ ತರಗತಿಯಿಂದಲೇ ಮಕ್ಕಳಿಗೆ ಯೋಗ ತರಬೇತಿಯನ್ನು ನೀಡುವ ಯೋಜನೆಯಿರುವುದು ಕಂಡುಬರುತ್ತಿದೆ.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಪ್ರಕಾರ, ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ವಾರಕ್ಕೆ 5 ಅವಧಿಗಳು, 6-7 ತರಗತಿಗಳಿಗೆ ವಾರಕ್ಕೆ 3 ಅವಧಿಗಳು ಮತ್ತು 8-10 ತರಗತಿಯವರಿಗೆ ವಾರಕ್ಕೆ 4 ಅವಧಿಗಳ ಯೋಗ ಶಿಕ್ಷಣವಿದ್ದು, ಐದನೇ ತರಗತಿಯಿಂದ ತಾತ್ವಿಕ ಹಾಗೂ ಪ್ರಾಯೋಗಿಕ ಶಿಕ್ಷಣಗಳೆರಡೂ ಪಠ್ಯಕ್ರಮದಲ್ಲಿರುತ್ತವೆ ಮತ್ತು ಒಂದನೇ ತರಗತಿಯಿಂದಲೇ ಮಕ್ಕಳಿಗೆ ಯೋಗಾಭ್ಯಾಸದಲ್ಲಿ ನಿರಂತರ ಮೌಲ್ಯಮಾಪನ ಪರೀಕ್ಷೆಗಳಿರುತ್ತವೆ. ರಾಜ್ಯದ ಎಲ್ಲಾ ಪ್ರಾಥಮಿಕ ಹಾಗೂ ಫ್ರೌಢ ಶಾಲೆಗಳಲ್ಲಿ ಯೋಗ ಶಿಕ್ಷಣಕ್ಕಾಗಿ ರೂ.4.55 ಕೋಟಿ ವೆಚ್ಚದಲ್ಲಿ ಒಟ್ಟು 65000 ಶಿಕ್ಷಕರನ್ನು ನಿಯುಕ್ತಿಗೊಳಿಸಲಾಗುವುದೆಂದೂ ಇಲಾಖೆಯು ಹೇಳಿದೆ.
ರಾಜ್ಯ ಸರಕಾರದ ಈ ನಿರ್ಧಾರವು ಸಾಕಷ್ಟು ಸಾಕ್ಷ್ಯಾಧಾರಾಗಳನ್ನು ಆಧರಿಸಿಲ್ಲವೆನ್ನುವುದು ಸ್ಪಷ್ಟವಾಗಿದೆ. ಯೋಗಾಭ್ಯಾಸದ ಒಳಿತು-ಕೆಡುಕುಗಳ ಬಗ್ಗೆ ಹಲವಾರು ಸಣ್ಣದಾದ, ಅಲ್ಪಕಾಲೀನ ಅಧ್ಯಯನಗಳನ್ನು ನಡೆಸಲಾಗಿದ್ದು, ಎಲ್ಲರಿಗೂ ಒಂದೇ ರೀತಿಯ ಯೋಗಾಭ್ಯಾಸದಿಂದ ನಿಸ್ಸಂದೇಹವಾದ ಪ್ರಯೋಜನವಿದೆಯೆಂದಾಗಲೀ, ಅದು ಸಂಪೂರ್ಣವಾಗಿ ಸುರಕ್ಷಿತವೆಂದಾಗಲೀ ಶ್ರುತ ಪಡಿಸುವ ಯಾವುದೇ ದೊಡ್ದ, ದೀರ್ಘಕಾಲೀನ, ಇಕ್ಕಡೆಗೂ ಅರಿವಿಲ್ಲದ, ನಿಯಂತ್ರಿತವಾದ ಅಧ್ಯಯನಗಳ ವರದಿಗಳಿಲ್ಲ. ಅಷ್ಟೇ ಅಲ್ಲದೆ, ಯೋಗಾಭ್ಯಾಸದಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲಾಗಬಹುದಾದ ಒಳಿತು-ಕೆಡುಕುಗಳ ಬಗ್ಗೆ ಯಾವುದೇ ಅಧ್ಯಯನಗಳನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ವತಿಯಿಂದಲೂ ನಡೆಸಲಾಗಿಲ್ಲ. ಮಕ್ಕಳ ಬೆಳವಣಿಗೆ ಹಾಗೂ ಆರೋಗ್ಯಗಳ ದೃಷ್ಟಿಯಿಂದ ಯೋಗಾಭ್ಯಾಸವು ಇತರ ದೈಹಿಕ ವ್ಯಾಯಾಮ ಅಥವಾ ಆಟೋಟಗಳಷ್ಟೇ ಪ್ರಯೋಜನಕರವೆಂದು ಸಾಬೀತು ಪಡಿಸುವ ಯಾವುದೇ ವರದಿಗಳಾಗಲೀ, ಅದರಿಂದ ಮಕ್ಕಳ ಸ್ಮರಣ ಶಕ್ತಿ ಅಥವಾ ಇನ್ನಿತರ ಸಾಮರ್ಥ್ಯಗಳ ಮೇಲೆ ಯಾವುದೇ ಪರಿಣಾಮಗಳುಂಟಾಗುವ ಬಗೆಗಿನ ಅಧ್ಯಯನಗಳಾಗಲೀ, ಅಥವಾ ದೇಹದ ವಿವಿಧ ಅಂಗಗಳು ಹಾಗೂ ಎಲುಬುಗಳು ಇನ್ನೂ ಬೆಳೆಯುತ್ತಿರುವ ಮಕ್ಕಳಲ್ಲಿ ಯೋಗಾಭ್ಯಾಸವು ಸುರಕ್ಷಿತವೆಂದು ಶ್ರುತಪಡಿಸುವ ವರದಿಗಳಾಗಲೀ ಲಭ್ಯವಿಲ್ಲ. ಅಲ್ಲದೆ, ಮಕ್ಕಳ ಮೇಲೆ ಈಗಾಗಲೇ ವಿದ್ಯಾಭ್ಯಾಸದ ಹೊರೆಯು ಅತಿಯಾಗಿದ್ದು, ಯೋಗಾಭ್ಯಾಸವನ್ನು ಪೂರ್ಣ ಪ್ರಮಾಣದ ವಿಸ್ತೃತ ಪಠ್ಯವಾಗಿ ಸೇರಿಸುವುದರಿಂದ ಅದು ಇನ್ನಷ್ಟು ಹೆಚ್ಚುವ ಅಪಾಯವೂ ನಿಚ್ಚಳವಾಗಿದೆ. ವಿವಿಧ ಕ್ರೀಡಾ ಪ್ರಕಾರಗಳಲ್ಲಿ ನಮ್ಮ ಮಕ್ಕಳು ಹಾಗೂ ಯುವಕರನ್ನು ತರಬೇತುಗೊಳಿಸಿ ಒಲಿಂಪಿಕ್ ಇತ್ಯಾದಿಗಳ ಸ್ಪರ್ಧಾತ್ಮಕ ಕ್ರೀಡಾರಂಗದಲ್ಲಿ ನಮ್ಮ ದೇಶದ ಸ್ಥಾನಮಾನಗಳನ್ನು ಔನ್ನತ್ಯಕ್ಕೆ ಒಯ್ಯಬೇಕಾದ ತುರ್ತು ಅಗತ್ಯವಿರುವ ಇಂದಿನ ಕಾಲಘಟ್ಟದಲ್ಲಿ, ಕೇವಲ ಯೋಗಶಿಕ್ಷಣವೊಂದಕ್ಕೇ ಇತರೆಲ್ಲಾ ದೈಹಿಕ ಕಸರತ್ತುಗಳು ಹಾಗೂ ಕ್ರೀಡೆಗಳಿಗೆ ಯಾವತ್ತೂ ಮೀಸಲಿಟ್ಟದ್ದಕ್ಕಿಂತ ಎಷ್ಟೋ ಹೆಚ್ಕು ಪಟ್ಟು ಅವಧಿಯನ್ನು ಒದಗಿಸುವುದರಿಂದ ಈ ಎಲ್ಲಾ ಕ್ರೀಡೆಗಳಲ್ಲಿ ನಮ್ಮ ಮಕ್ಕಳು ಹಾಗೂ ಯುವಜನರ ಭಾಗವಹಿಸುವಿಕೆಯು ಇನ್ನಷ್ಟು ಅಧೋಗತಿಗಿಳಿಯುವುದಕ್ಕೆ ಕಾರಣವಾಗಬಹುದು. ಹಾಗಿರುತ್ತಾ, ಒಂದನೇ ತರಗತಿಯ ಮಕ್ಕಳಿಂದ ಹಿಡಿದು ಎಲ್ಲಾ ವಿದ್ಯಾರ್ಥಿಗಳಿಗೆ ವಿಸ್ತೃತವಾಗಿ ಏಕರೂಪದ ಯೋಗಾಭ್ಯಾಸವನ್ನು ಮಾಡಿಸುವುದರ ವಿವೇಚನೆಯ ಬಗ್ಗೆಯೂ, ಅಂತಹ ಯೋಗಾಭ್ಯಾಸದಿಂದ ಮಕ್ಕಳ ದೈಹಿಕ ಅಥವಾ ಮಾನಸಿಕ ಆರೋಗ್ಯದ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳನ್ನು ಗುರುತಿಸಿ, ನಿಭಾಯಿಸುವಲ್ಲಿ ಶಿಕ್ಷಕರಲ್ಲಿರಬೇಕಾದ ಸನ್ನದ್ಧತೆಯ ಬಗ್ಗೆಯೂ ಹಲವು ಪ್ರಶ್ನೆಗಳು ಸಹಜವಾಗಿಯೇ ಏಳುತ್ತವೆ.
ಆದ್ದರಿಂದ ಮಕ್ಕಳ ಆರೋಗ್ಯ ಹಾಗೂ ಭವಿಷ್ಯದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಬಲ್ಲ ಇಂತಹಾ ನಿರ್ಧಾರಗಳನ್ನು ತರಾತುರಿಯಲ್ಲಿ ಕೈಗೊಳ್ಳುವ ಮೊದಲು ಆ ಕುರಿತು ಸಾಕಷ್ಟು ವೈಜ್ಞಾನಿಕ ಅಧ್ಯಯನಗಳನ್ನು ನಡೆಸಬೇಕೆಂದೂ, ಮಕ್ಕಳು, ಹೆತ್ತವರು, ವೈದ್ಯಕೀಯ ತಜ್ಞರು, ಕ್ರೀಡಾಪಟುಗಳು ಹಾಗೂ ಶಿಕ್ಷಣ ತಜ್ಞರಿಂದ ವ್ಯಾಪಕ ಅಭಿಪ್ರಾಯಗಳನ್ನು ಪಡೆದುಕೊಂಡು ಆ ಕುರಿತಾದ ಸರ್ವ ಸಮ್ಮತ ನೀತಿಯೊಂದನ್ನು ರೂಪಿಸಬೇಕೆಂದೂ ನಾವು ಕರ್ನಾಟಕ ಸರಕಾರವನ್ನು ಆಗ್ರಹಿಸುತ್ತೇವೆ. ಯಾವುದೇ ಸಂದರ್ಭದಲ್ಲೂ ಬೆಳೆಯುವ ಮಕ್ಕಳಿಗೆ ಕಡ್ದಾಯವಾದ ಯೋಗಶಿಕ್ಷಣವು ಅಪೇಕ್ಷಣೀಯವಲ್ಲ.
ಡಾ| ಶ್ರೀನಿವಾಸ ಕಕ್ಕಿಲ್ಲಾಯ, ತಜ್ಞ ವೈದ್ಯರು, ಮಂಗಳೂರು
ಪ್ರೊ|ನರೇಂದ್ರ ನಾಯಕ್, ಜೀವರಸಾಯನಶಾಸ್ತ್ರಜ್ಞರು, ಅಧ್ಯಕ್ಷರು, ಅಖಿಲ ಭಾರತ ವಿಚಾರವಾದಿ ಸಂಘಗಳ ಒಕ್ಕೂಟ, ಮಂಗಳೂರು
ಡಾ| ಕೆ.ಎಸ್.ಮಾಧವ ರಾವ್ಮ, ನೋರೋಗ ತಜ್ಞರು, ಅಧ್ಯಕ್ಷರು, ದ.ಕ. ಜಿಲ್ಲಾ ವಿಚಾರವಾದಿಗಳ ಸಂಘ, ಮಂಗಳೂರು
ಮಂಗಳೂರು, 6-1-2009
Memorandum to the Hon’ble Minister of Health, Govt. of India
Dear Sir,
Sub: Proposal to introduce compulsory yoga for school children – memorandum reg.
We have come to understand from media reports that the Govt., is contemplating introduction of compulsory training in yoga as a part of physical education for all school children, right from the first standard.
We are writing this to express our dismay at this proposal. Enough evidence is not available about the utility of yoga in helping the physical and mental development of a growing child and the data on the safety of yoga in children in lacking. In support, we place before you the following reports:
A systematic review of the literature on the effect of yoga on quality of life and physical outcome measures in the pediatric population by Galantino ML et al.,[1] included 24 studies of which none could be considered as of high quality. None of the studies provided adequate data to assess improvements in QOL over a significant part of childhood and adolescence, as most were of short duration. The reviewers also felt that the poor adverse event reporting in most of the studies limited any conclusions about the relative safety of yoga as an exercise.
It is an accepted fact that injuries do occur while practicing yoga, particularly if participants try to force their bodies into positions they are not ready for or are inattentive or due to failure of the instructors to give proper modifications.[2] Muscular injuries like pulled hamstrings, strains of the hip flexors, the neck and the low back are said to be common. Certain yoga postures can lead to bursitis or tendinitis around the shoulder or elbow, or produce wrist strain. Hyperextension of the knees or elbows may cause tear or pinch of the menisci, ligaments or the joint cartilage. Herniation, fractures and degeneration of intervertebral discs are some of the more serious yoga injuries.[2]
In a survey of musculoskeletal injury among 110 Ashtanga Vinyasa yoga practitioners, a total of 107 musculoskeletal injuries were reported and 68 practitioners (62%) reported having had at least one injury lasting longer than one month, and some practitioners reported more than one injury. The three most common injury locations were hamstring, knee, and low back.[3] A case of a fracture separation of the epiphyseal plate of the distal tibia in a 15-year-old girl during the execution of a yoga posture has been reported[4], raising concerns about the safety of yoga in growing children.
The fact that yoga may not be safe is acknowledged even by many who have expertise in yoga. According to Vijai P. Sharma, PhD, of the Behavioral Medicine Center, Cleveland, TN,[5] pranayama like kapalabhati and bhastrika may worsen preexisting structural or functional problems, excessively strain the cardiopulmonary system and cause significant pain and discomfort. Marian Garfinkel, [6] Director at BKS Iyengar Yoga Studio of Philadelphia, PA, USA feels that if performed incorrectly, asanas can be injurious and the wide variation among teachers and practitioners of yoga may be confusing.
And last but not the least, the practice of yoga needs to be restricted during the menstrual period[7,8]. With the average age at menarche being 12-13 years in India,[9] this may pose awkward problems for the girl students and anxiety for their parents if yoga is made compulsory in schools.
Therefore, in view of the absence of unambiguous evidence about the benefits as well as safety of yoga in children, the difficulties for girl students in performing yoga and the absolute necessity to have well trained yoga teachers rather than physical education trainers to impart safe and meaningful yoga training, we request you to kindly drop the proposal of compulsory yoga education for school children. There is a need for a large, multicentric, randomized, controlled, blinded, long term prospective study about the benefits and adverse effects of yoga in growing children and in any case, making yoga education compulsory for children is not desirable under any circumstances.
Thanking you, Yours sincerely,
Dr. B.S. Kakkilaya Consultant Physician Mangalore
Dr. K.S. Madhava Rao Psychiatrist and President, D.K. Rationalist Association Mangalore
Prof. Narendra Nayak Biochemist and President, Fed of Indian Rationalist Assns, Mangalore
Dr. Raghuveer, Asso. Professor of Paediatrics, Kasturba Medical College Mangalore
Mangalore, Jan 23, 2009
CC: Hon’ble Minister for Education, Govt. of Karnataka
References:
- Galantino, ML, Galbavy R, Quinn L. Therapeutic Effects of Yoga for Children: A Systematic Review of the Literature. Pediatric Physical Therapy. Volume 20(1) Spring 2008 pp 66-80.
- Crews L. Injury prevention: Yoga IDEA Fitness Journal Feb 2006 p56
- Mikkonen J, Pedersen P, McCarthy PW. A Survey of Musculoskeletal Injury among Ashtanga Vinyasa Yoga Practitioners. International Journal of Yoga Therapy 2008;18(1):59-64 Available at http://iayt.metapress.com/content/l0748p25k2558v77/
- Bianchi G, Cavenago C, Marchese M. Can the practice of yoga be dangerous? Considerations over a case of epiphyseal separation of the distal tibia in a teenager. Journal of Orthopaedics and Traumatology. 2004;5(3):188-190. Available at http://www.springerlink.com/content/66kdhup2376xr6b5/
- Sharma VP. Yoga Therapy in Practice: Pranayama Can Be Practiced Safely International Journal of Yoga Therapy 2007;17:75-79
- Garfinkel M. Yoga as a Complementary Therapy. Geriatrics Aging. 2006;9(3):190-194. Available at http://www.medscape.com/viewarticle/525187_1
- Geeta S. Iyengar Yoga and menstruation. Available at http://www.yogaholidays.net/magazine/Menstruation.htm
- Prafulla Dorle. Yoga & Menstruation Available at http://www.yogapoint.com/articles/yoga_menstruation.htm
- Deo DS, Gattarji CH. Age at Menarche and Associated Factors Indian Journal of Pediatrics 2004;71:565 Available at http://www.springerlink.com/content/3qjr760427652007/fulltext.pdf?page=1
ಕೇಂದ್ರ ಸರಕಾರದ ಮಾನ್ಯ ಆರೋಗ್ಯ ಮಂತ್ರಿಗಳಿಗೆ ಮನವಿ
ಮಾನ್ಯರೇ,
ವಿಷಯ: ಶಾಲಾ ಮಕ್ಕಳಿಗೆ ಕಡ್ಡಾಯ ಯೋಗ ಶಿಕ್ಷಣ ನೀಡುವ ಬಗ್ಗೆ ಮನವಿ
ಎಲ್ಲಾ ಶಾಲಾ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಕಡ್ಡಾಯವಾಗಿ ಯೋಗಶಿಕ್ಷಣವನ್ನು ನೀಡುವ ಬಗ್ಗೆ ಸರಕಾರವು ಚಿಂತಿಸುತ್ತಿರುವ ವಿಚಾರವು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಪ್ರಸ್ತಾಪದಿಂದ ನಮಗಾಗಿರುವ ನಿರಾಶೆಯನ್ನೂ, ಚಿಂತೆಯನ್ನೂ ವ್ಯಕ್ತಪಡಿಸಲಿಕ್ಕಾಗಿ ನಾವಿದನ್ನು ಬರೆಯುತ್ತಿದ್ದೇವೆ.
ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಯೋಗದಿಂದ ಏನಾದರೂ ಪ್ರಯೋಜನಗಳಿವೆಯೆನ್ನುವ ಬಗೆಗಾಗಲೀ, ಮಕ್ಕಳಲ್ಲಿ ಯೋಗಾಭ್ಯಾಸದ ಸುರಕ್ಷತೆಯ ಬಗೆಗಾಗಲೀ ಸಾಕಷ್ಟು ಆಧಾರಗಳಿಲ್ಲ. ಇದಕ್ಕೆ ಪೂರಕವಾಗಿ ಈ ಕೆಳಗಿನ ಮಾಹಿತಿಯನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ:
ಯೋಗದಿಂದ ಮಕ್ಕಳ ಜೀವನ ಗುಣಮಟ್ಟದ ಬಗ್ಗೆ ಹಾಗೂ ದೈಹಿಕ ಪರಿಣಾಮಗಳ ಬಗ್ಗೆ ಲಭ್ಯವಿರುವ ಎಲ್ಲಾ ಅಧ್ಯಯನಗಳನ್ನು ಗಲಾಂಟಿನೋ ಮತ್ತಿತರರು [1] ವಿಮರ್ಶಿಸಿದ್ದು, ತಾವು ವಿಮರ್ಶೆಗೊಳಪಡಿಸಿದ 24 ಅಧ್ಯಯನಗಳಲ್ಲಿ ಯಾವೊಂದೂ ಉತ್ತಮ ಗುಣಮಟ್ಟದ್ದಾಗಿರಲಿಲ್ಲ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಅಧ್ಯಯನಗಳು ಅಲ್ಪಕಾಲಾವಧಿಯವಾಗಿದ್ದು, ಮಕ್ಕಳು ಬೆಳೆದು ಹದಿಹರೆಯಕ್ಕೆ ತಲುಪವವರೆಗೆ ಅದರಿಂದ ಅವರ ಜೀವನದ ಗುಣಮಟ್ಟದ ಮೇಲಾಗುವ ಪರಿಣಾಮಗಳ ಬಗ್ಗೆ ಅಂದಾಜು ಮಾಡಲು ಅಗತ್ಯವಿರುವ ಮಾಹಿತಿಯು ಅವುಗಳಿಂದ ದೊರೆಯುವುದಿಲ್ಲ. ಹೆಚ್ಚಿನ ಅಧ್ಯಯನಗಳಲ್ಲಿ ಅಡ್ಡಪರಿಣಾಮಗಳ ಬಗ್ಗೆ ಮಾಹಿತಿಯೇ ವಿರಳವಾಗಿರುವುದರಿಂದ ಯೋಗವನ್ನು ಒಂದು ವ್ಯಾಯಾಮವಾಗಿ ಬಳಸುವುದರ ಸುರಕ್ಷತೆಯ ಬಗ್ಗೆ ಯಾವೊಂದು ನಿರ್ಣಯಕ್ಕೂ ಬರುವಂತಿಲ್ಲವೆಂದು ಈ ಲೇಖಕರು ಅಭಿಪ್ರಾಯ ಪಡುತ್ತಾರೆ.
ಯೋಗಾಭ್ಯಾಸದ ವೇಳೆ ದೇಹಕ್ಕೆ ಹಾನಿಯಾಗುವ ಸಾಧ್ಯತೆಗಳಿವೆಯೆನ್ನುವುದು ಸರ್ವವಿದಿತವಾಗಿದ್ದು, ಯೋಗಾಭ್ಯಾಸಿಗಳು ಆಸನಗಳನ್ನು ಸರಿಯಾಗಿ ಮಾಡದಿದ್ದರೆ, ಶಿಕ್ಷಕರ ಸೂಚನೆಗಳನ್ನು ಸರಿಯಾಗಿ ಪಾಲಿಸದಿದ್ದರೆ ಅಥವಾ ಶಿಕ್ಷಕರು ಸರಿಯಾದ ಸೂಚನೆಗಳನ್ನು ಕೊಡದಿದ್ದರೆ ಅಂತಹಾ ಹಾನಿಗಳುಂಟಾಗುವ ಸಂಭವನೀಯತೆಯು ಹೆಚ್ಚಿರುತ್ತದೆ.[2] ಯೋಗಾಭ್ಯಾಸದಿಂದ ಕಾಲು, ತೊಡೆ, ಕುತ್ತಿಗೆ ಮತ್ತು ಬೆನ್ನಿನ ಕೆಳಭಾಗಗಳ ಸ್ನಾಯುಗಳಿಗೆ ಹಾನಿಯಾಗುವುದು ಸಾಮಾನ್ಯ. ಕೆಲವೊಂದು ನಿರ್ದಿಷ್ಟ ಯೋಗ ಭಂಗಿಗಳಿಂದ ಭುಜ, ಮೊಣಕೈ ಹಾಗೂ ಮಣಿಗಂಟುಗಳಿಗೆ ಹಾನಿಯಾಗಬಹುದು. ಮೊಣಕಾಲು ಹಾಗೂ ಮೊಣಕೈಗಳನ್ನು ವಿಪರೀತವಾಗಿ ಬಗ್ಗಿಸುವುದರಿಂದ ಈ ಸಂಧಿಗಳಿಗೆ ಹಾನಿಯಾಗುವ ಸಾಧ್ಯತೆಗಳಿವೆ. ಬೆನ್ನೆಲುಬಿನ ಮೇಲೆ ಹಲವು ರೀತಿಯ ಗಂಭೀರ ತೊಂದರೆಗಳಿಗೂ ಯೋಗಾಸನಗಳು ಕಾರಣವಾಗಬಹುದು.[2]
ಅಷ್ಟಾಂಗ ವಿನ್ಯಾಸ ಯೋಗವನ್ನು ಅಭ್ಯಾಸ ಮಾಡುತ್ತಿದ್ದ 110 ಜನರಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ,[3] ಸ್ನಾಯುಗಳು ಹಾಗೂ ಮೂಳೆಗಳಿಗೆ ತೊಂದರೆಯಾದ 107 ಪ್ರಕರಣಗಳು ಗುರುತಿಸಲ್ಪಟ್ಟವು ಹಾಗೂ ಅವರಲ್ಲಿ 68 ಜನರಲ್ಲಿ (62%) ಕನಿಷ್ಠ ಒಂದು ವಿಧದ ಹಾನಿಯಾದರೂ ಒಂದು ತಿಂಗಳಿಗೂ ಹೆಚ್ಚುಕಾಲ ಉಳಿದುಕೊಂಡುದನ್ನು ಗುರುತಿಸಲಾಯಿತು. ಕಾಲಿನ ಸ್ನಾಯುಗಳು, ಮೊಣಗಂಟು ಹಾಗೂ ಕೆಳಬೆನ್ನಿನ ತೊಂದರೆಗಳು ಹೆಚ್ಚು ಸಾಮಾನ್ಯವಾಗಿದ್ದವು. ಯೋಗನಿರತಳಾಗಿದ್ದ 15 ವರ್ಷದ ಹುಡುಗಿಯೊಬ್ಬಳ ಕಾಲಿನ ಸಂಧಿಯಲ್ಲಿ ಮುರಿತವುಂಟಾದ ಪ್ರಕರಣವೂ ವರದಿಯಾಗಿದ್ದು,[4] ಮಕ್ಕಳಲ್ಲಿ ಯೋಗಾಭ್ಯಾಸದ ಸುರಕ್ಷತೆಯ ಬಗ್ಗೆ ಆತಂಕಕ್ಕೆ ಕಾರಣವಾಗಿದೆ.
ಯೋಗಾಭ್ಯಾಸವು ಅತಿಸುರಕ್ಷಿತವಲ್ಲವೆನ್ನುವ ಅಭಿಪ್ರಾಯವನ್ನು ಹಲವು ಯೋಗತಜ್ಞರೇ ವ್ಯಕ್ತಪಡಿಸಿದ್ದಾರೆ. ಅಮೆರಿಕಾದ ಕ್ಲೀವ್ ಲ್ಯಾಂಡಿನಲ್ಲಿರುವ ವರ್ತನಾ ವೈದ್ಯವಿಜ್ಞಾನ ಕೇಂದ್ರದ ವಿಜಯ ಶರ್ಮಾ ಅವರ ಪ್ರಕಾರ,[5] ಕಪಾಲಭಾತಿ ಹಾಗೂ ಭಸ್ತ್ರಿಕದಂತಹ ಪ್ರಾಣಾಯಾಮಗಳಿಂದ ಆಗಲೇ ಇರಬಹುದಾದ ದೈಹಿಕ ಹಾಗೂ ಮಾನಸಿಕ ತೊಂದರೆಗಳು ಹೆಚ್ಚಾಗಬಹುದು, ಹೃದಯದ ಮೇಲೆ ಒತ್ತಡವು ಹೆಚ್ಚಬಹುದು ಹಾಗೂ ನೋವು ಇತ್ಯಾದಿ ಅನಾನುಕೂಲತೆಗಳಾಗಬಹುದು. ಅಮೆರಿಕಾದ ಫಿಲಡೆಲ್ಫಿಯಾದಲ್ಲಿ ಬಿ.ಕೆ.ಎಸ್ ಐಯ್ಯಂಗಾರ್ ಯೋಗ ಕೇಂದ್ರದ ನಿರ್ದೇಶಕರಾಗಿರುವ ಮರಿಯನ್ ಗರ್ಫಿಂಕ್ಲ್ ಹೇಳುವಂತೆ,[6] ಯೋಗಾಸನಗಳನ್ನು ಸರಿಯಾಗಿ ಮಾಡದಿದ್ದರೆ ಹಾನಿಯುಂಟಾಗುವ ಸಾಧ್ಯತೆಗಳಿದ್ದು, ಯೋಗ ಶಿಕ್ಷಕರು ಹಾಗೂ ಅಭ್ಯಾಸಿಗಳ ಯೋಗಾಭ್ಯಾಸದ ಕ್ರಮದಲ್ಲಿ ವ್ಯತ್ಯಾಸಗಳೂ, ವೈವಿಧ್ಯತೆಗಳೂ ಹೆಚ್ಚುತ್ತಿರುವುದು ಗೊಂದಲಕ್ಕೆ ಕಾರಣವಾಗಬಹುದು.
ಕೊನೆಯದಾಗಿ, ಅತಿ ಮುಖ್ಯ ವಿಚಾರವೆಂದರೆ, ಹುಡುಗಿಯರು ಋತುಸ್ರಾವದ ದಿನಗಳಲ್ಲಿ ಹಲವು ವಿಧದ ಯೋಗಾಸನಗಳನ್ನು ನಡೆಸುವಂತಿಲ್ಲ.[7,8] ಭಾರತದಲ್ಲಿ 12-13 ವರ್ಷ ವಯಸ್ಸಿಗೆ ಹುಡುಗಿಯರು ಋತುಮತಿಗಳಾಗುವುದರಿಂದ,[9] ಶಾಲೆಗಳಲ್ಲಿ ಯೋಗಶಿಕ್ಷಣವನ್ನು ಕಡ್ಡಾಯಗೊಳಿಸುವ ಕ್ರಮವು ಹೆಚ್ಚಿನ ವಿದ್ಯಾರ್ಥಿನಿಯರಿಗೆ ಅನಗತ್ಯವಾದ ತೊಂದರೆಗಳಿಗೆ ಹಾಗೂ ಅತೀವ ಮುಜುಗರಕ್ಕೂ, ಹೆತ್ತವರಲ್ಲಿ ಆತಂಕಕ್ಕೂ ಕಾರಣವಾಗುತ್ತದೆ.
ಆದ್ದರಿಂದ, ಮಕ್ಕಳಲ್ಲಿ ಯೋಗಾಭ್ಯಾಸದ ಪ್ರಯೋಜನಗಳು ಹಾಗೂ ಸುರಕ್ಷತೆಯ ಬಗ್ಗೆ ಸುಸ್ಪಷ್ಟವಾದ ಆಧಾರಗಳಿನ್ನೂ ಲಭ್ಯವಿಲ್ಲದಿರುವಾಗ, ಹುಡುಗಿಯರಿಗ ಕಡ್ಡಾಯ ಯೋಗಶಿಕ್ಷಣದಲ್ಲಿ ತೊಂದರೆಗಳಾಗುವ ಸಾಧ್ಯತೆಗಳಿರುವಾಗ ಮತ್ತು ಸರಿಯಾದ ಹಾಗೂ ಸುರಕ್ಷಿತವಾದ ಯೋಗಶಿಕ್ಷಣವನ್ನು ನೀಡಲು ಸಾಮಾನ್ಯ ದೈಹಿಕ ಶಿಕ್ಷಕರಿಗಿಂತ ನುರಿತ ಯೋಗ ಶಿಕ್ಷಕರೇ ಹೆಚ್ಚು ಸೂಕ್ತರಾಗಿರುವುದರಿಂದ ಶಾಲಾ ಮಕ್ಕಳಿಗೆ ಯೋಗ ಶಿಕ್ಷಣವನ್ನು ಕಡ್ದಾಯಗೊಳಿಸುವ ಪ್ರಸ್ತಾಪವನ್ನು ಈ ಕೂಡಲೇ ಕೈ ಬಿಡಬೇಕಾಗಿ ನಾವು ವಿನಂತಿಸುತ್ತೇವೆ. ಬೆಳೆಯುವ ಮಕ್ಕಳಲ್ಲಿ ಯೋಗಾಭ್ಯಾಸದ ಪ್ರಯೋಜನಗಳು ಹಾಗೂ ಹಾನಿಗಳ ಬಗ್ಗೆ ದೊಡ್ಡದಾದ, ದೀರ್ಘ ಕಾಲೀನ, ಬಹುಕೇಂದ್ರಗಳಲ್ಲಿ ನಡೆಸುವ, ಇಕ್ಕಡೆಗೂ ಅರಿವಿಲ್ಲದ, ನಿಯಂತ್ರಿತವಾದ ವೈಜ್ಞಾನಿಕ ಅಧ್ಯಯನಗಳ ಅಗತ್ಯವಿದೆಯಲ್ಲದೆ, ಯಾವುದೇ ಸಂದರ್ಭದಲ್ಲೂ ಮಕ್ಕಳಿಗೆ ಯೋಗ ಶಿಕ್ಷಣವನ್ನು ಕಡ್ಡಾಯಗೊಳಿಸುವುದು ಅಪೇಕ್ಷಣೀಯವಲ್ಲ.
ಧನ್ಯವಾದಗಳೊಂದಿಗೆ, ಇಂತೀ ತಮ್ಮ ವಿಶ್ವಾಸಿಗಳಾದ
ಡಾ|ಬಿ.ಶ್ರೀನಿವಾಸ ಕಕ್ಕಿಲ್ಲಾಯ ತಜ್ಞ ವೈದ್ಯರು, ಮಂಗಳೂರು
ಡಾ|ಕೆ.ಎಸ್. ಮಾಧವ ರಾವ್, ಮನೋರೋಗ ತಜ್ಞರು ಹಾಗೂ ಅಧ್ಯಕ್ಷರು, ದ.ಕ. ವಿಚಾರವಾದಿ ವೇದಿಕೆ, ಮಂಗಳೂರು
ಪ್ರೊ. ನರೇಂದ್ರ ನಾಯಕ್, ಜೀವರಸಾಯನಶಾಸ್ತ್ರಜ್ಞರು ಹಾಗೂ ಅಧ್ಯಕ್ಷರು, ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟ, ಮಂಗಳೂರು
ಡಾ| ರಘುವೀರ್, ಅಸೋ. ಪ್ರೊಫೆಸರ್, ಶಿಶುರೋಗ ವಿಭಾಗ, ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಂಗಳೂರು
ಮಂಗಳೂರು, ಜನವರಿ 23, 2009
ಆಕರಗಳು:
- Galantino, ML, Galbavy R, Quinn L. Therapeutic Effects of Yoga for Children: A Systematic Review of the Literature. Pediatric Physical Therapy. Volume 20(1) Spring 2008 pp 66-80.
- Crews L. Injury prevention: Yoga IDEA Fitness Journal Feb 2006 p56
- Mikkonen J, Pedersen P, McCarthy PW. A Survey of Musculoskeletal Injury among Ashtanga Vinyasa Yoga Practitioners. International Journal of Yoga Therapy 2008;18(1):59-64 Available at http://iayt.metapress.com/content/l0748p25k2558v77/
- Bianchi G, Cavenago C, Marchese M. Can the practice of yoga be dangerous? Considerations over a case of epiphyseal separation of the distal tibia in a teenager. Journal of Orthopaedics and Traumatology. 2004;5(3):188-190. Available at http://www.springerlink.com/content/66kdhup2376xr6b5/
- Sharma VP. Yoga Therapy in Practice: Pranayama Can Be Practiced Safely International Journal of Yoga Therapy 2007;17:75-79
- Garfinkel M. Yoga as a Complementary Therapy. Geriatrics Aging. 2006;9(3):190-194. Available at http://www.medscape.com/viewarticle/525187_1
- Geeta S. Iyengar Yoga and menstruation. Available at http://www.yogaholidays.net/magazine/Menstruation.htm
- Prafulla Dorle. Yoga & Menstruation Available at http://www.yogapoint.com/articles/yoga_menstruation.htm
- Deo DS, Gattarji CH. Age at Menarche and Associated Factors Indian Journal of Pediatrics 2004;71:565 Available at http://www.springerlink.com/content/3qjr760427652007/fulltext.pdf?page=1
Leave a Reply